ನವದೆಹಲಿ, 2 ನವೆಂಬರ್ (ಹಿ.ಸ):
ಆ್ಯಂಕರ್ :ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ಯಮದಲ್ಲಿ ಒಂದಾಗಿರುವ ಕಲ್ಲಿದ್ದಲು ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ತನ್ನ ವಹಿವಾಟನ್ನು ಶೇಕಡ ೪೭ರಷ್ಟು ವೃದ್ಧಿಸಿಕೊಂಡಿದೆ ಎಂದು ಕಲ್ಲಿದ್ದಲು ಸಚಿವಾಲಯ ತಿಳಿಸಿದೆ.
ಪ್ರಸಕ್ತವಾಗಿ ಕಲ್ಲಿದ್ದಲು ವಹಿವಾಟಿನಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ಈ ಮಾರುಕಟ್ಟೆ ವ್ಯವಸ್ಥೆಯಿಂದ ಬೇಡಿಕೆ ಅನುಗುಣವಾಗಿ ವ್ಯಾಪಾರ ನಡೆಸಿದ ಕೋಲ್ ಸಂಸ್ಥೆ ಸುಮಾರು ೨೪ ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
