ಜಿಂಕೆಗಳನ್ನು ಸಂಕಷ್ಠದಿ0ದ ಪಾರುಮಾಡಿದ ಶಿಕ್ಷಕ ಮುನಿರಾಜು
ಕೋಲಾರ / ೩೧ ಅಕ್ಟೋಬರ್ : ಕೋಲಾರ ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಜಿಂಕೆಗಳ ಸಂತತಿ ಹೆಚ್ಚಿದೆ. ಕೋಲಾರ, ಬಂಗಾರಪೇಟೆ, ಕೆಜಿಎಫ್ ತಾಲ್ಲೂಕುಗಳ ಅರಣ್ಯ ಪ್ರದೇಶದಲ್ಲಿ ಸಾವಿರಾರು ಜಿಂಕೆಗಳ ಸಂಖ್ಯೆ ಏರಿಕೆಯಾಗಿದೆ. ಕಾಡಿನಲ್ಲಿ ಸುತ್ತಾಡುವ ಜಿಂಕೆಗಳು ಆಹಾರ ಮತ್ತು ನೀರಿಗಾಗಿ ಹೊರ ಬಂದು ಹಲವಾರು ಬಾರಿ ನಾಯಿಗಳು ಗಾಳಿಗೆ ತುತ್ತಾಗುತ್ತವೆ. ಇನ್ನೂ ಕೆಲವು ಸಂದರ್ಭಗಳಲ್ಲಿ ನೀರಿಗಾಗಿ ರೈತರ ತೋಟಗಳಲ್ಲಿ ಡ್ರಿಪ್ ಪೈಪ್ಗಳನ್ನು ಕಚ್ಚಿ ನೀರು ಹೀರುವಾಗ ಸಿಕ್ಕಿ ಹಾಕಿಕೊಂಡು ಒತ್ತಾಡುತ್ತವೆ. ಇಂತಹ ಪ್ರಕರಣ ಕೋಲಾರ ತಾಲ್ಲೂಕಿನ ಪಾರೇಹೊಸಹಳ್ಳಿ ಗ್ರಾಮದ ಬಳಿ ಸಂಭವಿಸಿದೆ.
ಕೋಲಾರ ತಾಲ್ಲೂಕು ಪಾರೇಹೊಸಹಳ್ಳಿ ಗ್ರಾಮದ ಹಿಪ್ಪುನೇರಳೆ ತೋಟದ ಬಳಿ ಮಂಗಳವಾರ ಬೆಳಿಗ್ಗೆ ೭ ರ ಸಮಯದಲ್ಲಿ ಚದುಮನಹಳ್ಳಿ ಗ್ರಾಮದ ಎನ್ ಮುನಿರಾಜು ರವರು ವಾಯು ವಿಹಾರಕ್ಕೆ ಹೋದಾಗ ಎರಡು ಚಿಂಕೆಗಳು ರಾತ್ರಿ ಆಹಾರ ಹುಡುಕಿಕೊಂಡು ಬಂದು ರೈತರು ನೀರು ಹರಿಸಲು ಬಿಟ್ಟಿದ್ದ ಡ್ರಿಪ್ ಪೈಪ್ಗಳು ಎರಡೂ ಜಿಂಕೆಗಳ ಕೊಂಬುಗಳಿಗೆ ಸಿಕ್ಕಿಹಾಕಿಕೊಂಡಿದ್ದವು. ಹೊರಬರಲಾರದೆ ಕಷ್ಟ ಪಡುತ್ತಿದ್ದುದನ್ನು ಕಂಡು ಪಾರೇಹೊಸಹಳ್ಳಿ ಗ್ರಾಮದ ಇಬ್ಬರ ರೈತರ ಸಹಾಯ ಪಡೆದು ಜಿಂಕೆಗಳ ಕೊಂಬುಗಳಿಗೆ ಸುತ್ತಿಕೊಂಡಿದ್ದ ಡ್ರಿಪ್ ಪೈಪ್ಗಳನ್ನು ಬಿಡಿಸಿ ಜಿಂಕೆಗಳು ಕಾಡಿಗೆ ಬಿಟ್ಟಿರುತ್ತಾರೆ.
ಚಿತ್ರ ; ಕೋಲಾರ ತಾಲ್ಲೂಕಿನ ಪಾರೇಹೊಸಹಳ್ಳಿ ಗ್ರಾಮದ ಬಳಿ ಹಿಪ್ಪುನೇರಳೆ ತೋಟದಲ್ಲಿ ಡ್ರಿಪ್ ಪೈಪ್ಗಳಲ್ಲಿ ನೀರು ಕುಡಿಯುವಾಗ ಸಿಕ್ಕಿಹಾಕಿಕೊಂಡಿದ್ದ ಜಿಂಕೆಗಳನ್ನು ಗ್ರಾಮಸ್ಥರು ರಕ್ಷಿಸಿದರು.
