ಕುಷ್ಟಗಿ, 27 ಅಕ್ಟೋಬರ್ (ಹಿ.ಸ):
ಆ್ಯಂಕರ್ : ಕುಷ್ಟಗಿ ತಾಲೂಕಿನ ರೈತನೊಬ್ಬ ಸಾಲದ ಸುಳಿಗೆ ಸಿಲುಕಿ ಗುರುವಾರ ನೇಣಿಗೆ ಶರಣಾಗಿದ್ದಾನೆ. ತಾಲೂಕಿನ ಗುಡಿಕಲಕೇರಿ ಸೀಮಾ ವ್ಯಾಪ್ತಿಯ ಜಮೀನೊಂದರಲ್ಲಿ ಈ ಘಟನೆ ಜರುಗಿದೆ. ಮೂಲತಃ ತಾಲೂಕಿನ ಕೆ.ಬೋದೂರಿನ ರೈತ ಕೃಷ್ಣಪ್ಪ ತಂ. ಲಚಮಪ್ಪ ರಾಠೋಡ(54) ನೇಣಿಗೆ ಶರಣಾದ ರೈತ.
ಇಳಕಲ್ಲಿನ ಪ್ರತಿಷ್ಠಿತ ಬ್ಯಾಂಕ್ ಸೇರಿದಂತೆ ಬೇರೆಡೆಯೂ ಸಾಲ ಪಡೆದು ತನ್ನ 4 ಎಕರೆ 18 ಗುಂಟೆ ಜಮೀನಿನಲ್ಲಿ ಹತ್ತು ಕೊಳವೆಬಾವಿ ಕೊರೆಯಿಸಿದ್ದ. ಒಂದೊರಲ್ಲಿ ಅಲ್ಪ ನೀರು ಲಭ್ಯವಾಗಿತ್ತು. ಆದರೆ, ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಅಂತರ್ಜಲ ಬತ್ತಿದ ಪರಿಣಾಮ ಬೆಳೆ ಕೈಗೆಟುಕದೇ ರೈತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಇದೆ ವೇಳೆ ಸಾಲಗಾರರ ಕಿರುಕುಳ ತಾಳಲಾರದೆ ನೊಂದ ರೈತ, ತನ್ನ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಕುಟುಂಬದ ಮೂಲಗಳು ಹೇಳುತ್ತವೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿಂದೂಸ್ತಾನ್ ಸಮಾಚಾರ್
