ಕೋಲಾರ, ೨೬ ಅಕ್ಟೋಬರ್ (ಹಿ.ಸ) :
ಆ್ಯಂಕರ್ : ಇಲ್ಲಿನ ಸರ್ಕಾರಿ ಎಸ್.ಎನ್.ಆರ್. ಜಿಲ್ಲಾ ಮಕ್ಕಳ ಆಸ್ಪತ್ರೆಯ ವಾರ್ಡಿನಲ್ಲಿ ನವಜಾತ ಶಿಶುವನ್ನು ಅಪಹರಣ ಮಾಡಲಾಗಿದೆ. ಕಳೆದ ಐದು ದಿನಗಳ ಗಂಡು ಮಗು ಜನನವಾಗಿತ್ತು. ಮಾಲೂರು ತಾಲ್ಲೂಕಿನ ನಂದಿನಿ, ಪೂವರಸನ್ ದಂಪತಿಯ ೫ ದಿನದ ಗಂಡು ಮಗುವನ್ನು ಕಳ್ಳತನ ಮಾಡಲಾಗಿದೆ. ಮೂವರು ಮಹಿಳೆಯರು ಮಗುವನ್ನು ಕಳ್ಳತನ ಮಾಡಿ ಆಸ್ಪತ್ರೆಯಿಂದ ಪರಾರಿಯಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಮಗುವನ್ನು ಕಳೆದುಕೊಂದ ದಂಪತಿ ಮಾಲೂರು ಪಟ್ಟಣದ ಪಟೇಲ್ ಬೀದಿಯ ನಿವಾಸಿಗಳಾಗಿದ್ದಾರೆ. ಕೋಲಾರ ಜಿಲ್ಲಾ ಸರ್ಕಾರಿ ಮಕ್ಕಳ ಆಸ್ಪತ್ರೆಯಲ್ಲಿನ ಹೆರಿಗೆ ನಂತರದ ಕೊಠಡಿಯಲ್ಲಿದ್ದ ಬಾಣಂತಿ ಚಿಕಿತ್ಸೆ ಪಡೆಯುತ್ತಿದ್ದರು. ಮಗುವನ್ನು ಆಟ ಆಡಿಸುವ ಸೋಗಿನಲ್ಲಿ ಮಹಿಳೆಯರು ಕಳ್ಳತನ ಮಾಡಿದ್ದು, ೭ ತಿಂಗಳಿಗೆ ಮಗುವಿಗೆ ಜನ್ಮ ನೀಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಮಗುವಿಗೆ ಹೃದಯ ಸಂಬ0ದಿ ಖಾಯಿಲೆ ಇದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಾಳೆ ಬೆಂಗಳೂರಿಗೆ ದಂಪತಿಗಳು ತೆರಳಬೇಕಿತ್ತು. ಕೋಲಾರ ಮಕ್ಕಳ ಆಸ್ಪತ್ರೆಯಲ್ಲಿ ಭದ್ರತೆ ಲೋಪದಿಂದ ಘಟನೆ ಸಂಭವಿಸಿದೆ. ಸ್ಥಳಕ್ಕೆ ಕೋಲಾರ ನಗರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಮೂವರು ಅಪರಿಚತರು ಮಗು ಕದ್ದು ಪರಾರಿಯಾಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಬ್ಯಾಗ್ನಲ್ಲಿ ಇಟ್ಟುಕೊಂಡು ಮೂವುರ ಪರಾರಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಮಗುವನ್ನು ಕಳೆದುಕೊಂಡ ತಾಯಿ ನಂದಿನಿ ತೀವ್ರ ಆಘಾತದಲ್ಲಿದ್ದಾರೆ.
ಚಿತ್ರ ; ಕೋಲಾರ ಸರ್ಕಾರಿ ಎಸ್.ಎನ್.ಆರ್. ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಅಪಹರಣವಾಗಿದ್ದು, ತಾಯಿ ಆತಂಕಗೊ0ಡಿದ್ದಾರೆ.
