ಗೋರಖ್ಪುರ, 25ಅಕ್ಟೋಬರ್ (ಹಿ.ಸ):
ಆ್ಯಂಕರ್ : ಅ. 25 ಬಿಜೆಪಿ ಸರ್ಕಾರದ ಕಲ್ಯಾಣ ಯೋಜನೆಗಳು ರಾಮ ರಾಜ್ಯದ ಅಡಿಪಾಯವಾಗಿದೆ ಮತ್ತು ದೇಶವು ಅಯೋಧ್ಯೆಯಲ್ಲಿ ಭಗವಾನ್ ರಾಮನ ಭವ್ಯ ಮಂದಿರವನ್ನು ಎದಿರು ನೋಡುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ದಸರಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಸಾವಿರಾರು ವರ್ಷಗಳ ಹಿಂದೆ ಭಗವಾನ್ ರಾಮನು ಸುಳ್ಳು ಮತ್ತು ಅನ್ಯಾಯವನ್ನು ಸೋಲಿಸಿ ರಾಮರಾಜ್ಯದ ಅಡಿಪಾಯವನ್ನು ಸ್ಥಾಪಿಸಿದನು. ಭಗವಾನ್ ರಾಮನ ಆದರ್ಶಗಳನ್ನು ಅನುಸರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಲಕ್ಷಾಂತರ ಬಡ ವ್ಯಕ್ತಿಗಳಿಗೆ ವಸತಿ, ನೈರ್ಮಲ್ಯ ಸೌಲಭ್ಯಗಳು, ಆಹಾರ ಮತ್ತು ಆರೋಗ್ಯ ಸೇರಿದಂತೆ ವಿವಿಧ ಅಗತ್ಯ ಸೌಕರ್ಯಗಳನ್ನು ಖಾತ್ರಿಪಡಿಸಲಾಗಿದೆ ಎಂದು ಅವರು ಹೇಳಿದರು.
ಸನಾತನ ಧರ್ಮವನ್ನು ವಿರೋಧಿ ಸುವವರು ಜಾತಿ ಆಧಾರಿತ ತಾರತಮ್ಯದ ಮೂಲಕ ಸಮಾಜವನ್ನು ವಿಭಜಿಸಲು ಮತ್ತು ಸಾಮಾಜಿಕ ಮತ್ತು ರಾಷ್ಟ್ರೀಯ ಏಕತೆಯನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆದಿತ್ಯನಾಥ್ ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
