ನವದೆಹಲಿ, 24ಅಕ್ಟೋಬರ್ (ಹಿ.ಸ):
ಆ್ಯಂಕರ್ :ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅರುಣಾಚಲ ಪ್ರದೇಶದಲ್ಲಿನ ಭಾರತೀಯ ಸೇನಾಪಡೆ ತುಕಡಿಯೊಂದಿಗೆ ಇಂದು ದಸರಾ ಹಬ್ಬ ಆಚರಿಸಲಿದ್ದಾರೆ.
ಸಚಿವರು ನಿನ್ನೆ ಸಂಜೆಯೆ ತೇಜ್ಪುರ್ಗೆ ಆಗಮಿಸಿದ್ದು, ನಾಲ್ಕು ಕೋರ್ ಕೇಂದ್ರ ಕಚೇರಿಯಲ್ಲಿ ಯೋಧರೊಂದಿಗೆ ಸಂವಾದ ನಡೆಸಿದರು. ಸಚಿವರು ಇಂದು ಶಸ್ತ್ರ ಪೂಜೆ ನೆರವೇರಿಸಲಿದ್ದಾರೆ.
ಸೈನಿಕರೊಂದಿಗೆ ’ಬಡಾಖಾನಾ’ ಭೋಜನ ಕೂಟದಲ್ಲಿ ಭಾಗಿಯಾದ ಸಚಿವರು ಎಲ್ಲ ಶ್ರೇಣಿಯ ಯೋಧರು ಒಂದೇ ಕುಟುಂಬದ ಸದಸ್ಯರಂತೆ ಒಗ್ಗೂಡಲು ಈ ಕೂಟ ನೆರವಾಗಲಿದೆ ಎಂದರು.
ಭ್ರಾತೃತ್ವ ಮತ್ತು ಏಕತೆಗೆ ಭಾರತೀಯ ಸೇನೆ ಅತ್ಯುತ್ತಮ ಉದಾಹರಣೆಯಾಗಿದ್ದು, ವಿವಿಧ ರಾಜ್ಯ, ಭಾಷೆ ಮತ್ತು ಮತ ಧರ್ಮಗಳ ಹಿನ್ನೆಲೆ ಇದ್ದರೂ ಒಂದೇ ಕುಟುಂಬದವರಂತೆ ಸಮನ್ವಯದಿಂದ ಕಾರ್ಯನಿರ್ವಹಿಸುವುದು ನಮ್ಮ ಸೇನೆಯ ಶಕ್ತಿಯಾಗಿದೆ. ಮಾತೃಭೂಮಿಯ ರಕ್ಷಣೆಗಾಗಿ ತ್ಯಾಗ ಮತ್ತು ಬಲಿದಾನಕ್ಕೆ ಸಿದ್ಧವಾಗುವ ಸಶಸ್ತ್ರ ಪಡೆಗಳ ಕಾರ್ಯ ಶ್ಲಾಘನೀಯ ಎಂದು ಸಚಿವರು ಹೇಳಿದರು.
ಭಾರತೀಯ ಸೇನಾಪಡೆಯ ಬದ್ಧತೆ, ಧೈರ್ಯ, ಸಾಹಸಗಳು ಜಾಗತಿಕ ಮನ್ನಣೆ ಪಡೆದಿದ್ದು, ಕಳೆದ ಕೆಲವು ವರ್ಷಗಳಲ್ಲಿ ಅಂತಾರಾಷ್ಟ್ರೀಯ ವಲಯದಲ್ಲಿ ದೇಶದ ಗೌರವ ಮತ್ತಷ್ಟು ಹೆಚ್ಚಾಗಿದೆ. ೨೦೨೭ರವರೆಗೆ ಭಾರತ ಜಗತ್ತಿನ ಅತಿ ದೊಡ್ಡ ಆರ್ಥಿಕತೆಯ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಲಿದೆ ಎಂದು ಸಚಿವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್
