ನವದೆಹಲಿ, 22ಅಕ್ಟೋಬರ್ :
ಆ್ಯಂಕರ್ :
’ತೇಜ್’ ಚಂಡಮಾರುತ ಇಂದು ತೀವ್ರ ಚಂಡಮಾರುತವಾಗಿ ರೂಪಾಂತರಗೊಳ್ಳುವ ಸಾಧ್ಯತೆಯಿದೆ. ಅರಬ್ಬೀ ಸಮುದ್ರದ ಮೂಲಕ ಬೀಸುವ ಚಂಡಮಾರುತ ಇದೇ ೨೫ ರ ಮುಂಜಾನೆ ಯೆಮೆನ್ನ ಅಲ್ ಘೈದಾ ಮತ್ತು ಒಮಾನ್ನ ಸಲಾಲಾ ನಡುವೆ ದಾಟುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ೧೨ ತಾಸಿನಲ್ಲಿ ನೈಋತ್ಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕಡಮೆಯಾಗಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿದೆ ಇಲಾಖೆ ತಿಳಿಸಿದೆ.
