ದೆಹಲಿ,21ಅಕ್ಟೋಬರ್ :
ಆ್ಯಂಕರ್ :
ಮುಂಬರುವ ಛತ್ತೀಸ್ ಗಢ ವಿಧಾನಸಭಾ ಚುನಾವಣೆಗೆ ಎರಡನೇ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇಂದು ಆರಂಭವಾಗಲಿದೆ. ಈ ಹಂತದಲ್ಲಿ ಒಟ್ಟು ೭೦ ಕ್ಷೇತ್ರಗಳಿಗೆ ಬರುವ ನವೆಂಬರ್ ೧೭ ರಂದು ಮತದಾನ ನಡೆಯಲಿದೆ. ಈ ನಡುವೆ ಛತ್ತೀಸ್ಗಢ ಮತ್ತು ಮಿಜೋರಾಂ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ನಿನ್ನೆ ಕೊನೆಯ ದಿನವಾಗಿತ್ತು. ಮಿಜೋರಾಂನ ಎಲ್ಲ ೪೦ ಮತ್ತು ಛತ್ತೀಸ್ಗಢದ ಒಟ್ಟು ೯೦ ಕ್ಷೇತ್ರಗಳ ಪೈಕಿ ೨೦ ಕ್ಷೇತ್ರಗಳಿಗೆ ಮುಂದಿನ ತಿಂಗಳು ೭ ರಂದು ಮತದಾನ ನಡೆಯಲಿದೆ.
