ಕೊಪ್ಪಳ, 20 ಅಕ್ಟೋಬರ್ :
ಆ್ಯಂಕರ್: ಕೊಪ್ಪಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಗಳಲ್ಲಿರುವ ಹಳೆಯ, ನಾಶಪಡಿಸಬೇಕಾದ ಸಿವಿಲ್ ಮತ್ತು ಕ್ರಿಮಿನಲ್ ಕಡತಗಳು, ಹಳೆಯ ಗೆಜೆಟ್ಗಳು, ಉಪಯೋಗಕ್ಕೆ ಬಾರದ ಫಾರಂಗಳು, ಹಳೆಯ ಪೇಪರ್ಗಳು ಮತ್ತು ಮುರಿದ ಪೀಠೋಪಕರಣಗಳ ಮಾರಾಟಕ್ಕೆ ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿ ಆಹ್ವಾನ ಮಾಡಲಾಗಿದೆ.
ಮೇಲ್ಕಂಡ ವಸ್ತುಗಳಿಗೆ ಹೆಚ್ಚಿನ ದರ ಸೂಚಿಸಿದವರಿಗೆ ಮಾರಾಟ ಮಾಡಲಾಗುವುದು. ಆಸಕ್ತಿ ಉಳ್ಳವರು ನವೆಂಬರ್ 06 ರೊಳಗೆ ದರವನ್ನು ಸೂಚಿಸಿ ಮುಚ್ಚಿದ ಲಕೋಟೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಬೇಕು. ನ.07 ರಂದು ಸಾಯಂಕಾಲ 05.30 ಗಂಟೆಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೊಠಡಿಯಲ್ಲಿ ಮುಚ್ಚಿದ ಲಕೋಟೆಗಳನ್ನು ತೆರೆಯಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಸಿ. ಅವರು ತಿಳಿಸಿದ್ದಾರೆ.
